ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಜಲ ಜೀವನ್ ಮಿಷನ್ (JJM) ಮತ್ತು ಸ್ವಚ್ಛ ಭಾರತ್ ಮಿಷನ್ (SBM) ಅಡಿಯಲ್ಲಿ ದೇಶದಲ್ಲಿ ಮಹತ್ವದ ಸಾಧನೆಗಳು ಆಗುತ್ತಿವೆ. ಜಲ ಜೀವನ್ ಮಿಷನ್ ಮೂಲಕ 15.40 ಕೋಟಿ ಗ್ರಾಮೀಣ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಲಾಗಿದ್ದು, ಸುಮಾರು 80% ವ್ಯಾಪ್ತಿ ಸಾಧಿಸಲಾಗಿದೆ. ಇದರಿಂದ ಲಕ್ಷಾಂತರ ಕುಟುಂಬಗಳ ಜೀವನದಲ್ಲಿ ಮಹತ್ತರ ಬದಲಾವಣೆ ಉಂಟಾಗಿದೆ. ಕರ್ನಾಟಕದಲ್ಲಿಯೂ ಜಲ ಜೀವನ್ ಮಿಷನ್ ವ್ಯಾಪ್ತಿಯು 2019ರಲ್ಲಿ 24% ಇದ್ದದ್ದು, 2024ರಲ್ಲಿ 82.5%ಕ್ಕೆ ಏರಿಕೆಯಾಗಿದೆ.
ಮೇ 2025ರಲ್ಲಿ ಉತ್ತರ ಪ್ರದೇಶದ ಮುಜಾಫರ್ ನಗರ ಮತ್ತು ಹರಿಯಾಣದ ಕರ್ನಾಲ್ ಜಿಲ್ಲೆಗಳಲ್ಲಿ ಸ್ವಚ್ಛ ಭಾರತ್ ಮಿಷನ್ ಅನುಷ್ಠಾನವನ್ನು ಸಚಿವರು ಪರಿಶೀಲಿಸಿದರು. ಇದೇ ಅವಧಿಯಲ್ಲಿ ಜಲ ಶಕ್ತಿ ಸಚಿವಾಲಯದಿಂದ ನವದೆಹಲಿಯಲ್ಲಿ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ಕುರಿತ ರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಜಲ ಶಕ್ತಿ ಸಚಿವಾಲಯವು ವೀಡಿಯೊ ಕಾನ್ಫರೆನ್ಸ್ ಮೂಲಕ 'ಸುಜಲ್‌ಗ್ರಾಮ ಸಮಾದ್' ಕಾರ್ಯಕ್ರಮವನ್ನು ಆಯೋಜಿಸಿತ್ತು.
ಜಲ ಜೀವನ್ ಮಿಷನ್ (JJM) ಪೋರ್ಟಲ್‌ನಲ್ಲಿ 'ಜಲ್ ಸೇವಾ ಆಂಕಲನ (Jal Seva Aankalan)' ಎಂಬ ಗ್ರಾಮ ಪಂಚಾಯಿತಿ ನೇತೃತ್ವದ ಕುಡಿಯುವ ನೀರಿನ ಸರಬರಾಜು ಕಾರ್ಯಕ್ಷಮತೆ ಮೌಲ್ಯಮಾಪನಕ್ಕಾಗಿ ರೂಪಿಸಲಾದ ಡಿಜಿಟಲ್ ಉಪಕರಣವನ್ನು ಇ-ಉದ್ಘಾಟನೆ ಮಾಡಲಾಗಿದೆ.