News
×

ನಮ್ಮ ಸೋಮಣ್ಣ


ಜನಸಾಮಾನ್ಯರ ಕಲ್ಯಾಣ ಮತ್ತು ಕ್ಷೇತ್ರದ ಅಭಿವೃದ್ಧಿಗೆ ನನ್ನ ಜೀವನ ಮೀಸಲು. ಎಲ್ಲ ವರ್ಗದ ಜನರ ಆಶೀರ್ವಾದವೇ ನನಗೆ ಸ್ಫೂರ್ತಿ.

- ಶ್ರೀ ವಿ. ಸೋಮಣ್ಣ



ನಮ್ಮ ಸೋಮಣ್ಣ

ವಸತಿ ಕ್ಷೇತ್ರದಲ್ಲೊಂದು ಮಹಾಕ್ರಾಂತಿ...

ಎರಡು ವರ್ಷಗಳಲ್ಲಿ 10 ಲಕ್ಷ ಮನೆ ನಿರ್ಮಾಣದ ಗುರಿ

ವಸತಿ ಮತ್ತು ಮೂಲ ಸೌಕರ್ಯ ಖಾತೆ ಸಚಿವರಾಗಿ ವಿ ಸೋಮಣ್ಣ ಅವರು ಅಭೂತಪೂರ್ವ ಕಾರ್ಯ ಸಾಧನೆ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ವಸತಿ ಯೋಜನೆಯಡಿ ಅರ್ಧಕ್ಕೆ ನಿಂತಿರುವ ಹಲವಾರು ಕಾಮಗಾರಿಗಳಿಗೆ ಸೋಮಣ್ಣ ಅವರು ಮರು ಜೀವ ನೀಡಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೂರು ಕಲ್ಪಿಸುವುದು ತಮ್ಮ ಗುರಿ ಎನ್ನುತ್ತಾರೆ ಸೋಮಣ್ಣ ಅವರು.

ಕೊಡಗಿನಲ್ಲಿ ನಿರಾಶ್ರಿತರಿಗೆ 460 ಮನೆಗಳು...

ಭೀಕರ ಭೂಕುಸಿತ ಹಾಗೂ ಪ್ರವಾಹದಿಂದ ಮನೆ ಕಳೆದುಕೊಂಡು ಬೀದಿಪಾಲಾದ ನಿರಾಶ್ರಿತರಿಗೆ ಕೊಡಗಿನಲ್ಲಿ 460 ಮನೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ನಿರ್ಮಿಸಿ ಹಸ್ತಾಂತರಿಸಿರುವುದು ಸೋಮಣ್ಣ ಅವರ ಸಾರಥ್ಯದ ವಸತಿ ಇಲಾಖೆಯ ಅಸಾಮಾನ್ಯ ಸಾಧನೆಗೆ ಸಾಕ್ಷಿ.

ಯೋಜನೆಗಳಿಗೆ ಮರು ಜೀವ...

“ಈ ಹಿಂದಿನ ಕಾಂಗ್ರೆಸ್ ಸರಕಾರ ಚುನಾವಣೆಗೂ ಮುನ್ನ ಪ್ರಚಾರ ಗಿಟ್ಟಿಸಿಕೊಳ್ಳಲು ಆಶ್ರಯ, ಬಸವ, ದೇವರಾಜ ಅರಸು, ಅಂಬೇಡ್ಕರ್ ಸೇರಿ ನಾನಾ ವಸತಿ ಯೋಜನೆಗಳಡಿ ಸುಮಾರು 19 ಲಕ್ಷ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿತ್ತು. ಆದರೆ, ಈ ಉದ್ದೇಶಕ್ಕಾಗಿ ಕೇವಲ 2 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದ ಸರಕಾರ, ಕೊನೆಗೆ 1200 ಕೋಟಿ ರೂ. ಬಿಡುಗಡೆ ಮಾಡಿತ್ತು. ಹಾಗಾಗಿ ಯೋಜನೆಗಳು ನನೆಗುದಿಗೆ ಬಿದ್ದಿತ್ತು. ಬಡವರಿಗೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಹಿಂದಿನ ಸರಕಾರದ ಎಲ್ಲ ವಸತಿ ಯೋಜನೆಗಳನ್ನು ಪೂರ್ಣಗೊಳಿಸುವ ನಿರ್ಧಾರವನ್ನು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಕೈಗೊಂಡಿದೆ,'' ಎಂದು ಸೋಮಣ್ಣ ಅವರು ವಿವರಿಸುತ್ತಾರೆ.



ನಮ್ಮ ಸೋಮಣ್ಣ

10 ಲಕ್ಷ ಮನೆಗಳ ನಿರ್ಮಾಣ...

“ಇಲಾಖೆಯಲ್ಲಿನ ಲೋಪಗಳನ್ನು ಸರಿಪಡಿಸಿ ಪಾರದರ್ಶಕತೆ ತಂದು ವಸತಿ ಯೋಜನೆಗಳನ್ನು ಚುರುಕುಗೊಳಿಸಲಾಗಿದೆ. ಇದೀಗ ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಎರಡು ವರ್ಷಗಳಲ್ಲಿ 10 ಲಕ್ಷ ಮನೆಗಳನ್ನು ನಿರ್ಮಾಣ ಮಾಡಲಾಗುವುದು,'' ಎಂಬ ಭರವಸೆ ಸೋಮಣ್ಣ ಅವರದು.

‘ರೇರಾ’ಗೆ ಕಾಯಕಲ್ಪ...

“ರಿಯಲ್ ಎಸ್ಟೇಟ್ ವಲಯದಲ್ಲಿ ಮಧ್ಯಮ ವರ್ಗದ ಗೃಹ ಖರೀದಿದಾರರ ಹಿತ ಕಾಯಲು ಕೇಂದ್ರ ಸರಕಾರ ‘ರೇರಾ’ ಕಾಯಿದೆ ಜಾರಿಗೊಳಿಸಿದೆ. ಅದರ ಆಶಯದಂತೆ ಕಾರ್ಯನಿರ್ವಹಿಸಲು ಸರಕಾರ ಬದ್ಧವಾಗಿದೆ, ಬಿಲ್ಡರ್ ಗಳಿಂದ ಗೃಹ ಖರೀದಿದಾರರಿಗೆ ಆಗುತ್ತಿರುವ ತೊಂದರೆ, ಕಿರುಕುಳ ತಪ್ಪಿಸಿ ಒಟ್ಟಾರೆ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಕ್ಕೆ ಕಾಯಕಲ್ಪ ನೀಡಲಾಗುವುದು" ಎಂದು ಸೋಮಣ್ಣ ಅವರು ಅಭಯ ನೀಡಿದ್ದಾರೆ.

ಬಡವರಿಗೆ ಅನ್ಯಾಯವಾಗದು...

''ವಸತಿ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು. ಶ್ರೀಮಂತರು ಹಲವೆಡೆ ವಸತಿ ಯೋಜನೆಗಳ ಸೌಲಭ್ಯ ಪಡೆದಿದ್ದಾರೆ. ಅಂತಹವರನ್ನು ಗುರುತಿಸಿ ವಸತಿ ಯೋಜನೆಯಿಂದ ಕೈಬಿಡಲಾಗುವುದು. ಸುಳ್ಳು ದಾಖಲೆ ನೀಡಿ, ಹಣ ಮಂಜೂರು ಮಾಡಿಸಿಕೊಳ್ಳುವುದಕ್ಕೆ ಅವಕಾಶ ನೀಡುವುದಿಲ್ಲ,'' ಎಂದು ಸೋಮಣ್ಣ ಅವರು ಖಚಿತವಾಗಿ ಹೇಳಿದ್ದಾರೆ.

ಮುಚ್ಚುವ ಹಂತದಲ್ಲಿದ್ದ ಗೃಹ ಮಂಡಳಿಯ ಆದಾಯ ವೃದ್ಧಿ...

“ನಾನು ವಸತಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ವೇಳೆ ಕರ್ನಾಟಕ ಗೃಹ ಮಂಡಳಿ(ಕೆ ಎಚ್ ಬಿ) ಬಹುತೇಕ ಮುಚ್ಚುವ ಹಂತದಲ್ಲಿತ್ತು. ಮಂಡಳಿಯಲ್ಲಿ ಬಿಡಿಗಾಸೂ ಇರಲಿಲ್ಲ. ಆದರೆ ನಾನು ಕೆ ಎಚ್ ಬಿಯಲ್ಲಿ ಭೂ ಆಡಿಟ್ ಮಾಡಿಸಿದಾಗ 9 ಸಾವಿರ ನಿವೇಶನಗಳು ಪತ್ತೆಯಾದವು. ನಿವೇಶನಗಳನ್ನು ಒತ್ತುವರಿ ಮಾಡಿಕೊಂಡಿರುವವರಿಂದ ಹಣ ಕಟ್ಟಿಸಿಕೊಂಡು ಸಕ್ರಮ ಮಾಡಿಕೊಡಲಾಗುತ್ತಿದೆ. ಜತೆಗೆ ಮೂಲೆ ನಿವೇಶನಗಳನ್ನು ಹರಾಜು ಹಾಕಲಾಗುತ್ತಿದೆ. ಇದರಿಂದ ಈಗಾಗಲೇ ಸುಮಾರು 500 ಕೋಟಿ ರೂ.ಗಳಷ್ಟು ಹಣ ಕೆ ಎಚ್ ಬಿಗೆ ಬಂದಿದೆ. ಇದರಿಂದ ಹೊಸದಾಗಿ ವಸತಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ,'' ಎಂದು ಸಚಿವ ವಿ. ಸೋಮಣ್ಣ ಅವರು ವಿವರಿಸಿದ್ದಾರೆ.

http://khb.karnataka.gov.in/english